Inhalers A-Z

ಇನ್ಹೇಲರ್ ವಿಧಗಳು

ಪ್ರಪಂಚದಾದ್ಯಂತ, ಇನ್ಹೇಲರ್‌ಗಳು ಸಾಮಾನ್ಯವಾಗಿ, ಅಸ್ತಮಾ ಮತ್ತು ಸಿಒಪಿಡಿಯಂತಹ, ಅನೇಕ ಉಸಿರಾಟದ ಸಮಸ್ಯೆಗಳಿಗೆ ಪ್ರಾಥಮಿಕ ಚಿಕಿತ್ಸೆಯೆಂದು ಸ್ವೀಕರಿಸಲ್ಪಟ್ಟಿವೆ. ಇನ್ಹೇಲರ್ ಮೂಲಕ ತೆಗೆದುಕೊಳ್ಳಬಹುದಾದ ಎರಡು ವಿಧದ ಔಷಧಗಳಿವೆ- ನಿಯಂತ್ರಕಗಳು (ಇವುಗಳು ನಿಮ್ಮ ರೋಗಲಕ್ಷಣಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ) ಮತ್ತು ಉಪಶಾಮಕಗಳು (ಇವುಗಳು ಒಂದು ದಾಳಿಯ ಸಂದರ್ಭದಲ್ಲಿ ತ್ವರಿತ ಉಪಶಮನವನ್ನು ನೀಡುತ್ತವೆ). ಇನ್ಹೇಲರ್‌ಗಳು ಅಸ್ತಮಾ ಮತ್ತು ಸಿಒಪಿಡಿಯನ್ನು ಚಿಕಿತ್ಸಿಸಲು ಮತ್ತು ನಿಯಂತ್ರಿಸಲು ಸುರಕ್ಷಿತವಾದ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗವೆಂದು ಸಾಬೀತಾಗಿವೆ, ಏಕೆಂದರೆ ಉಚ್ವಸಿಸಿದ ಔಷಧವು ನೇರವಾಗಿ ಶ್ವಾಸಕೋಶವನ್ನು ತಲುಪುತ್ತದೆ. 

ಸಾಮಾನ್ಯವಾಗಿ, ಇನ್ಹೇಲರ್ ಸಾಧನಗಳನ್ನು 4 ಪ್ರಕಾರಗಳಾಗಿ ವಿಂಗಡಿಸಬಹುದು - ಅಧಿಕ ಒತ್ತಡಕ್ಕೇರಿಸಲಾದ ಮೀಟರ್ಡ್ ಡೋಸ್ ಇನ್ಹೇಲರ್‌ಗಳು (ಪಿಎಂಡಿಐಗಳು), ಶುಷ್ಕ ಪೌಡರ್ ಇನ್ಹೇಲರ್‌ಗಳು (ಡಿಪಿಐಗಳು), ಶ್ವಾಸ ಚಲಿತ (ಬ್ರೆತ್ ಆಕ್ಚುಯೇಟೆಡ್) ಇನ್ಹೇಲರ್‌ಗಳು (ಬಿಎಐಗಳು) ಮತ್ತು ನೆಬುಲೈಜರ್‌ಗಳು.

  1. ಅಧಿಕ ಒತ್ತಡಕ್ಕೇರಿಸಲಾದ ಮೀಟರ್ಡ್ ಡೋಸ್ ಇನ್ಹೇಲರ್‌ಗಳು (ಪಿಎಂಡಿಐಗಳು)

ಪಂಪ್ ಇನ್ಹೇಲರ್‌ಗಳು ಎಂದೂ ಕರೆಯಲಾಗುತ್ತಿದ್ದು, ಇವುಗಳು ಅತ್ಯಂತ ಸಾಮಾನ್ಯವಾಗಿ ಬಳಸುವ ಇನ್ಹೇಲರ್ ಸಾಧನಗಳಾಗಿವೆ. ಅವು ಮುಂದೂಡುವ ಸಾಧನದ ಮೇಲೆ-ಆಧಾರಿತವಾಗಿರುತ್ತವೆ ಮತ್ತು, ಏರೋಸಾಲ್ ಸ್ಪ್ರೇ ರೂಪದಲ್ಲಿ, ಶ್ವಾಸಕೋಶಗಳಿಗೆ ಒಂದು ನಿರ್ದಿಷ್ಟ, ಪೂರ್ವ-ಮಾಪನ ಪ್ರಮಾಣದ ಔಷಧಗಳನ್ನು ತಲುಪಿಸುತ್ತದೆ; ಇದನ್ನು ಉಸಿರಿನೊಂದಿಗೆ ಒಳಗೆಳೆದುಕೊಳ್ಳಬೇಕಾಗುತ್ತದೆ. ಅದು  ಪ್ರತಿ ಬಾರಿ ಚಾಲನಗೊಳಿಸಿದಾಗ ಪುನರುತ್ಪಾದ್ಯ ಡೋಸುಗಳನ್ನು ಬಿಡುಗಡೆ ಮಾಡುತ್ತದೆ. ಇದರರ್ಥ ಒಂದೇ ಪ್ರಮಾಣದ ಡೋಸ್ ಪ್ರತಿ ಬಾರಿ ಬಿಡುಗಡೆಯಾಗುತ್ತದೆ. ಈ ಇನ್ಹೇಲರ್‌ಗಳು ಔಷಧದ ಬಿಡುಗಡೆಯನ್ನು ಪ್ರಚೋದಿಸಲು ರೋಗಿಗಳ ಉಚ್ಛ್ವಸನವನ್ನು ಅವಲಂಬಿಸುವುದಿಲ್ಲ. ಅವುಗಳು ಔಷಧದ ಡಬ್ಬಿಯ (ಕ್ಯಾನಿಸ್ಟರ್) ಒತ್ತುವಿಕೆ ಮತ್ತು ಡೋಸ್‌ನ  ನಡುವೆ ಹೊಂದಾಣಿಕೆಯನ್ನು ಅಗತ್ಯವಾಗಿಸುತ್ತವೆ ಸರಳವಾಗಿ ಹೇಳುವುದಾದರೆ, ಔಷಧದ ಡಬ್ಬಿಯನ್ನು ಒತ್ತಿದಾಗ  ಮತ್ತು ಡೋಸ್ ಬಿಡುಗಡೆಯಾಗುವ ನಿಖರವಾದ ಕ್ಷಣದಲ್ಲಿ ನೀವು ಉಸಿರನ್ನು ಒಳಗೆಳದುಕೊಳ್ಳಬೇಕಾಗುತ್ತದೆ. ಪಿಎಂಡಿಐಗಳು ಡೋಸ್ ಗಣಕವನ್ನು ಸಹ ಹೊಂದಿದ್ದು, ಸಾಧನದಲ್ಲಿ ಉಳಿದಿರುವ ಪಫ್‌ಗಳ ಸಂಖ್ಯೆಯ ಜಾಡನ್ನು ಇರಿಸುವುದನ್ನು ಇದು ಸುಲಭಗೊಳಿಸುತ್ತದೆ. 

 

ಲಿಂಕ್: https://www.youtube.com/watch?v=qFXf7RUavMM

ಪಿಎಂಡಿಐಗೆ ಜತೆಗೂಡಿಸಿ ಬಳಸಬಹುದಾದ ಕೆಲವು ಸಾಧನಗಳು ಅದರ ಬಳಕೆಯನ್ನು ಸುಲಭಗೊಳಿಸುತ್ತವೆ. 

ಝೀರೊಸ್ಟಾಟ್ ವಿಟಿ ಸ್ಪೇಸರ್

ಈ ಸಾಧನವು ಪಿಎಂಡಿಐ ಅನ್ನು ಒತ್ತಿದ ನಂತರ ಸ್ವಲ್ಪ ಸಮಯದವರೆಗೆ ಔಷಧವನ್ನು ಹಿಡಿದಿಟ್ಟುಕೊಳ್ಳುತ್ತದೆ. ಹಾಗಾಗಿ, ಔಷಧದ ಡಬ್ಬಿಯನ್ನು ಒತ್ತಿದಾಗ  ಮತ್ತು ಡೋಸ್ ಬಿಡುಗಡೆಯಾಗುವ ನಿಖರವಾದ ಅದೇ ಕ್ಷಣದಲ್ಲಿ ನೀವು ಶ್ವಾಸದೊಂದಿಗೆ ಒಳಗೆಳೆದುಕೊಳ್ಳದಿದ್ದರೂ ಸಹ, ಈ ಸ್ಪೇಸರ್ ಔಷಧವನ್ನು ಉಚ್ಛ್ವಸಿಸುವುದಕ್ಕೆ ಸಹಾಯಮಾಡುತ್ತದೆ. 

ಲಿಂಕ್: https://www.youtube.com/watch?v=lOv0ODD6Vd4

ಬೇಬಿ ಮಾಸ್ಕ್

ನಿಮಗೆ ಅಥವಾ ನಿಮ್ಮ ಮಗುವಿಗೆ ಝೀರೊಸ್ಟ್ಯಾಟ್ ವಿಟಿ ಸ್ಪೇಸರಿನ ಮೌತ್‌ಪೀಸ್ ಅನ್ನು ಸರಿಯಾಗಿ ಹಿಡಿದುಕೊಳ್ಳಲು ಸಾಧ್ಯವಾಗದಿದ್ದರೆ, ನೀವು ಬೇಬಿ ಮಾಸ್ಕ್ ಅನ್ನು ಝೀರೊಸ್ಟ್ಯಾಟ್ ವಿಟಿ ಸ್ಪೇಸರ್‌ಗೆ ಜೋಡಿಸಬಹುದು ಮತ್ತು ನಂತರ ಪಿಎಂಡಿಐ ಅನ್ನು ಬಳಸಬಹುದು.

ಲಿಂಕ್: https://www.youtube.com/watch?v=4y-PG500fFU

ಹಫ್ ಪಫ್ ಕಿಟ್

ಸ್ಪೇಸರ್ ಮತ್ತು ಬೇಬಿ ಮಾಸ್ಕ್ ಹಫ್ ಪಫ್ ಕಿಟ್‌ನಲ್ಲಿ ಪೂರ್ವಭಾವಿ ವ್ಯವಸ್ಥೆಯಾಗಿ ಬರುತ್ತದೆ. ಅದು ಪೂರ್ವಭಾವಿ ವ್ಯವಸ್ಥೆಯಾಗಿರುವುದರಿಂದ, ಒಂದು ತುರ್ತು ಸಂದರ್ಭದಲ್ಲಿ ಔಷಧವನ್ನು ತ್ವರಿತವಾಘಿ ತಲುಪಿಸಲು ಸಹಾಯಮಾಡುತ್ತದೆ ಮತ್ತು ಸಮಯವನ್ನು ಉಳಿಸುತ್ತದೆ. 

ಲಿಂಕ್: https://www.youtube.com/watch?v=emLVSoIwKmg

  1. ಶುಷ್ಕ ಪುಡಿ ಇನ್ಹೇಲರ್‌ಗಳು (ಡಿಪಿಐಗಳು)

ಈ ರೀತಿಯ ಇನ್ಹೇಲರ್‌ಗಳು ಔಷಧಗಳನ್ನು ಶುಷ್ಕ ಪುಡಿ ರೂಪದಲ್ಲಿ ತಲುಪಿಸುತ್ತವೆ. ಡಿಪಿಐಗಳು ಶ್ವಾಸದಿಂದ ಚಾಲನೆಗೊಳ್ಳುವ ಸಾಧನಗಳಾಗಿದ್ದು, ಸಾಧನದಿಂದ ಔಷಧಧ ಬಿಡುಗಡೆಯಾಗುವಿಕೆಯು ನಿಮ್ಮ ಉಚ್ಛ್ವಸನದ ಮೇಲೆ ಅವಲಂಬಿಸಿರುತ್ತದೆ. ಪಿಎಂಡಿಐಗಳಿಗೆ ಹೋಲಿಸಿ, ಅವುಗಳಲ್ಲಿ ಮುಂದೂಡುವ ಸಾಧನಗಳು ಮತ್ತು ಸಮನ್ವಯತೆಯ ಅಗತ್ಯವಿಲ್ಲದಿರುವುದರಿಂದ, ಅವುಗಳನ್ನು ಬಳಸುವುದು ಸುಲಭವಾಗಿರುತ್ತದೆ. ಸಾಮಾನ್ಯವಾಗಿ, ಡಿಪಿಐಗಳು ಒಂಟಿ ಡೋಸ್ ಸಾಧನಗಳು, ಆದರೂ ಬಹು-ಡೋಸ್ ಡಿಪಿಐಗಳು ಸಹ ಲಭ್ಯವಿವೆ.

ರಿವೋಲೈಜರ್

ರಿವೊಲೈಜರ್ ಒಂದು ಬಳಸಲು ಸುಲಭವಾಗಿರುವ ಡಿಪಿಐ ಆಗಿದ್ದು, ಇದನ್ನು ಸಾಮಾನ್ಯವಾಗಿ ವಿವಿಧ ರೋಟಾಕ್ಯಾಪ್‌ಗಳೊಂದಿಗೆ ಬಳಸಲಾಗುತ್ತದೆ. ಉಚ್ಛ್ವಸನ ಹರಿವಿನ ಪ್ರಮಾಣವು ಕಡಿಮೆಯಾಗಿರುವಾಗಲೂ ಸಹ, ಇದು ಒಂದು ನಿಖರವಾದ ಔಷಧದ ಡೋಸ್ ಮತ್ತು ಹೆಚ್ಚು ಪರಿಣಾಮಕಾರಿ ಪ್ರಸರಣವನ್ನು ಒದಗಿಸುತ್ತದೆ.  

 

ಲಿಂಕ್: https://www.youtube.com/watch?v=7WYrSinFtgY

 

ರೋಟಹೇಲರ್

ಸಂಪೂರ್ಣವಾಗಿ ಪಾರದರ್ಶಕವಾಗಿದ್ದು, ರೋಟಹೇಲರ್ ನೀವು ಔಷಧದ ಸೂಚಿಸಿದ ಸಂಪೂರ್ಣ ಡೋಸ್ ಅನ್ನು ಉಚ್ವಸಿಸಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಲು ನಿಮಗೆ ಸಾಧ್ಯಗೊಳಿಸುತ್ತದೆ.

ಲಿಂಕ್: https://www.youtube.com/watch?v=mDXwrPCRl_M

  1. ಶ್ವಾಸ ಚಲಿತ ಇನ್ಹೇಲರ್‌ಗಳು (ಬಿಎಐಗಳು)

ಪಿಎಂಡಿಐ ತಂತ್ರಜ್ಞಾನದ ಮುಂದುವರಿದ ಆವೃತ್ತಿಯಾಗಿದ್ದು, ಶ್ವಾಸ ಚಲಿತ ಇನ್ಹೇಲರ್‌ ಎಂಬುದು ಪಿಎಂಡಿಐ ಮತ್ತು ಡಿಪಿಐಗಳ ಅನುಕೂಲಗಳನ್ನು ಸಂಯೋಜಿಸುತ್ತದೆ. ಒಂದು ಆಕ್ಚುಯೇಟರ್ ಮೂಲಕ ಬಿಎಐ  ನಿಮ್ಮ ಉಚ್ಛ್ವಸನವನ್ನು ಗ್ರಹಿಸುತ್ತದೆ, ಮತ್ತು ಔಷಧವನ್ನು ಸ್ವಯಂಚಾಲಿತವಾಗಿ ಬಿಡುಗಡೆ ಮಾಡುತ್ತದೆ. 

ಆಟೋಹೇಲರ್

ಪಿಎಂಡಿಐ ಮತ್ತು ಕೆಲವು ಡಿಪಿಐಗಳಿಗಿಂತಲೂ ಬಳಸಲು ಆಟೋಹೇಲರ್ ತುಂಬಾ ಸುಲಭ.  ಇದನ್ನು - ಮಕ್ಕಳು, ವಯಸ್ಕರು ಮತ್ತು ಹಿರಿಯರು - ಎಲ್ಲರೂ ಪರಿಣಾಮಕಾರಿಯಾಗಿ ಬಳಸಬಹುದು. 

ಲಿಂಕ್: https://www.youtube.com/watch?v=P0oD2VOaLVY

  1. ನೆಬ್ಯುಲೈಜರುಗಳು

ಪಿಎಂಡಿಐಗಳು ಮತ್ತು ಡಿಪಿಐಗಳಂತಲ್ಲದೆ, ನೆಬ್ಯುಲೈಜರ್‌ಗಳು ದ್ರವ ಔಷಧವನ್ನು ಸೂಕ್ತವಾದ ಏರೋಸಾಲ್ ಹನಿಗಳಾಗಿ ಪರಿವರ್ತಿಸುತ್ತಿದ್ದು, ಅವು ಉಚ್ಛ್ವಸನಕ್ಕೆ ಸೂಕ್ತವಾಗಿರುತ್ತವೆ. ನೆಬುಲೈಜರುಗಳಿಗೆ ಸಮನ್ವಯತೆಯ ಅಗತ್ಯವಿಲ್ಲ ಮತ್ತು ಮಂಜು ರೂಪದಲ್ಲಿ ಶ್ವಾಸಕೋಶಗಳಿಗೆ ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಔಷಧವನ್ನು ವಿತರಿಸುತ್ತದೆ. ಅಸ್ತಮಾ ದಾಳಿಯ ಸಂದರ್ಭದಲ್ಲಿ,  ಶಿಶುಗಳಲ್ಲಿ, ಮಕ್ಕಳು, ಹಿರಿಯರು, ವಿಷಮಸ್ಥಿತಿಯಲ್ಲಿರುವ, ಪ್ರಜ್ಞಾಹೀನ ರೋಗಿಗಳು ಮತ್ತು ಪಿಎಂಡಿಐ ಅಥವಾ ಡಿಪಿಐ ಅನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗದವರಲ್ಲಿ ನೆಬುಲೈಜರ್‌ಗಳಿಗೆ ಆದ್ಯತೆ ನೀಡಲಾಗುತ್ತದೆ.

ಲಿಂಕ್: https://www.youtube.com/watch?v=OrsIbHWxVlQ